ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕವು ಒಂದು ಪ್ರಶಸ್ಥವಾದ ಸ್ಥಳ ಎಂದು ಹೆಸರು ಪಡೆದಿದೆ. ರಾಜ್ಯವು ಹಲವಾರು ವರ್ಷಗಳಿಂದ ಬದಲಾದ ಅವಶ್ಯಕತೆಗಳಿಗೆ ತಕ್ಕಂತೆ ಪ್ರಗತಿಪರ ದೃಷ್ಟಿಕೋನವನ್ನಿಟ್ಟುಕೊಂಡು ದೇಶದ ಆರ್ಥಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡುವತ್ತ ಗಮನಹರಿಸಿದೆ. ಬೃಹತ್ ಸಾರ್ವಜನಿಕ ಉದ್ದಿಮೆಗಳು/ಖಾಸಗಿ ಸ್ವಾಮ್ಯದ ಕೈಗಾರಿಕೆಗಳು ಹಾಗೂ ಬಹಳಷ್ಟು ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆಗಳನ್ನು ರಾಜ್ಯವು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇತರ ಮೌಲ್ಯಾಧಾರಿತ ಜ್ಞಾನವುಳ್ಳ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿದ್ದು ಇದರಿಂದಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ವಲಯಗಳಲ್ಲಿ ಸಂಶೋಧನೆ ಅಭಿವೃದ್ಧಿ ಸೌಲಭ್ಯವನ್ನು ಹೊಂದುವಲ್ಲಿ ಸಮರ್ಥವಾಗಿದೆ. ಕರ್ನಾಟಕ ರಾಜ್ಯವು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದಿರುವ ಹಲವಾರು ಗುಡಿ ಕೈಗಾರಿಕೆಗಳನ್ನು, ಕುಶಲ ಕೈಗಾರಿಕೆಗಳನ್ನು ಹಾಗೂ ಅತಿ ಸಣ್ಣ ಉದ್ಯಮಗಳಾದಂತಹ ಕರಕುಶಲ ಉದ್ದಿಮೆ, ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗಳನ್ನು ಹೊಂದಿದೆ.

 

ಗಣಿ ಮತ್ತು ಭೂವಿಜ್ಞಾನ ಇಲಾಖೆ

ಸಚಿವಾಲಯ ಮಟ್ಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುದೀರ್ಘ ಕಾಲದಿಂದಲೂ ಒಂದು ಬಹು ಮುಖ್ಯವಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾಗಿರುತ್ತದೆ. ಖನಿಜಾನ್ವೇಷಣೆ, ಖನಿಜಾಡಳಿತ ಮತ್ತು ಅವುಗಳ ನಿರ್ವಹಣೆಯು ಮುಖ್ಯ ಕ್ಷೇತ್ರ ಕಾರ್ಯಗಳಾಗಿದ್ದು, ಈ ಕೆಳಕಂಡಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ.

 

 1. ರಾಜ್ಯದಾದ್ಯಂತ ಕಲ್ಲುಗಣಿಗಳು ಮತ್ತು ಮುಖ್ಯ ಖನಿಜಗಳ ಗಣಿ ಚಟುವಟಿಕೆಗಳನ್ನು ನಿಯಂತ್ರಿಸುವುದು, ಖನಿಜ ಸಂರಕ್ಷಣೆ ಮತ್ತು ವೈಜ್ಞಾನಿಕ ಗಣಿಗಾರಿಕೆ ಇಲಾಖೆಯ ಮುಖ್ಯ ಉದ್ದೇಶಗಳಾಗಿದ್ದು, ಇಲಾಖೆಯ ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಜರುಗಿಸುವ ಸ್ಥಳ ಪರಿಶೀಲನೆಯಿಂದ ಗಣಿಗುತ್ತಿಗೆ ಪ್ರದೇಶಗಳಲ್ಲಿ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆ ತಡೆಯುವುದು, ಖನಿಜಗಳ ಸಾಗಾಣಿಕೆ ನಿಯಂತ್ರಿಸುವುದು ಮತ್ತು ನಿಯಮಾನುಸಾರ ಕಲ್ಲು ಗಣಿ ಗುತ್ತಿಗೆ ಮತ್ತು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡುವುದು ಇಲಾಖೆಯ ಕರ್ತವ್ಯಗಳಾಗಿರುತ್ತವೆ.
 2. ರಾಜ್ಯದಾದ್ಯಂತ ಮುಖ್ಯ ಖನಿಜ ಮತ್ತು ಉಪ ಖನಿಜಗಳ ಉತ್ಪಾದನೆ ಮತ್ತು ಸಾಗಾಣಿಕೆಯನ್ನಾಧರಿಸಿ ರಾಜಧನ ಸಂಗ್ರಹಣೆ ಮಾಡುವುದು.
 3. ರಾಜ್ಯದಾದ್ಯಂತ ಖನಿಜ ಸಂಪತ್ತಿನ ಅನ್ವೇಷಣೆ ಮತ್ತು ಅಬಿsವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 4. ಅನದಿsಕೃತ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ರಾಜಧನವನ್ನು ಸಂಗ್ರಹಿಸುವುದು.
 5. ನವೀನ ತಂತ್ರಜ್ಞಾನದ ಸಹಾಯದಿಂದ ಖನಿಜಾನ್ವೇಷಣೆ ಮತ್ತು ಅಬಿsವೃದ್ಧಿಯ ಕಾರ್ಯವನ್ನು ನಡೆಸುವಲ್ಲಿ ಖನಿಜದ ದರ್ಜೆ ಮತ್ತು ಕೈಗಾರಿಕೆಯಲ್ಲಿ ಅದರ ಉಪಯುಕ್ತತೆ, ಖನಿಜಗಳ ರಫ್ತು ಮತ್ತು ಖನಿಜವನ್ನು ಅವಲಂಭಿಸಿದ ಕೈಗಾರಿಕೆಗಳಿಗೆ ಅನುಕೂಲವಾಗುವ ಅಧ್ಯಯನವನ್ನು ಕೈಗೊಳ್ಳುವುದು.
 6. ಭೂಮಿಯ ಮೇಲೆ ಖನಿಜಗಳನ್ನು ಗುರುತಿಸಿದಾಗ, ಭೂಮಿಯ ಆಳದಲ್ಲಿ ಅವುಗಳ ಲಭ್ಯತೆ ಹಾಗೂ ಖನಿಜ ಪ್ರಮಾಣಗಳನ್ನು ನಿರ್ಧರಿಸಲು ನಿಕ್ಷೇಪ ಅಂದಾಜು ಮಾಡಲು ಕ್ರಮಗಳನ್ನು ಕೈಗೊಳ್ಳುವುದು.
 7. ರಸಾಯನ ಪ್ರಯೋಗಶಾಲೆಗಳಲ್ಲಿ ನೀರಿನ ಮಾದರಿಗಳ ಗುಣಮಟ್ಟ ವಿಶ್ಲೇಷಣೆ ಮತ್ತು ಖನಿಜ ಮಾದರಿಗಳಲ್ಲಿ ಶೇಕಡಾವಾರು ಖನಿಜಾಂಶದ ವಿಶ್ಲೇಷಣೆ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.
 8. ಅನಧಿಕೃತ ಗಣಿಗಾರಿಕೆ ಮತ್ತು ಖನಿಜ ಸಾಗಾಣಿಕೆಯನ್ನು ನಿಯಂತ್ರಿಸಲು ರಾಜ್ಯದ ಆಯಾಕಟ್ಟಿನ ಸ್ಥಳಗಳಲ್ಲಿ ಹಾಗೂ ಅಂತರರಾಜ್ಯ ಖನಿಜ ಸಾಗಾಣಿಕೆಯನ್ನು ತಡೆಗಟ್ಟಲು ಅಂತರರಾಜ್ಯ ಗಡಿ ತನಿಖಾ ಠಾಣೆಗಳನ್ನು ನಿರ್ಮಿಸಲಾಗಿದ್ದು, ಕಾರ್ಯ ನಿರ್ವಹಿಸಲಾಗುತ್ತಿದೆ.
 9. ಗಣಿಗಾರಿಕೆ ಮೌಲ್ಯವರ್ಧನೆಯ ಸಂಪೂರ್ಣ ಸರಣಿಯಲ್ಲಿರುವ ಎಲ್ಲಾ ಲೋಪದೋಷಗಳನ್ನು ನಿವಾರಿಸುವ ಸಲುವಾಗಿ “ವಿದ್ಯುನ್ಮಾನ ಆಡಳಿತದ ಮೂಲಕ ಖನಿಜಾಡಳಿತ ರೂಪಾಂತರ ಯೋಜನೆ” (‘Transformation of Mineral Administration through e-Governance’) ಯನ್ನು ಅಳವಡಿಸಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 06-07-2019 03:34 PM ಅನುಮೋದಕರು: DS Services(N R Jaganmatha)


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080